ಪ್ರಸ್ತುತ ವರ್ಣಚಿತ್ರದಲ್ಲಿ ಅಂತರ್ಗತ ಧ್ಯಾನಿ ಬಸವಣ್ಣನವರು ನಿರಂಬಳವಾಗಿ, ಹಸನ್ಮುಖರಾಗಿ ಮಲಗಿದ್ದ ಚಿತ್ರವಿದ್ದು, ಸುತ್ತಲು ಶರಣ ಸಮೂಹ ನೆರೆದು
ಅಂತರ್ಮುಖಿ ಬಸವಣ್ಣನವರನ್ನು ಬೆರೆದು ಅಂತರ್ಮುಖಿ ಬಸವಣ್ಣನವರನ್ನು ಬೆರಗು ಗಣ್ಣಿನಿಂದ ವಿಕ್ಷೀಸುತ್ತಿದ್ದಾರೆ. ಆತ್ಮಕಲ್ಯಾಣದ ಜೊತೆಗೆ
ಲೋಕಕಲ್ಯಾಣವನ್ನು ಮಾಡಿದ ಇವರು ಸಮಸಮಾಜವನ್ನು ನಿರ್ಮಿಸುವ ಕನಸನ್ನು ಹೊತ್ತು, ಲೋಕಕಲ್ಯಾಣವನ್ನು ಮಾಡಿದರು. ಸುಳಿದಾಡುವ ಗಾಳಿಯಲ್ಲಿ
ದೀಪ ಬೆಳಗುವ ಕಷ್ಟಕರವಾದ ಕೆಲಸವನ್ನು ಮಾಡಿ, ಲೋಕಕ್ಕೆ ಬೆಳಕು ನೀಡಿದ ಅಂತಜ್ಯೋðತಿ ಬಸವಣ್ಣನವರನ್ನು ಇಲ್ಲಿ ಚಿತ್ರಿಸಲಾಗಿದೆ.
