ಜಗತ್ತಿಗೆ ಬೆಳಕಾದ ಬಸವಣ್ಣನವರ ಜೀವನದ ಪ್ರಮುಖ ಘಟನೆಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಶರಣರ ಉಬ್ಬುಶಿಲ್ಪಗಳನ್ನು ಇಲ್ಲಿ
ಅಳವಡಿಸಲಾಗಿದೆ.
ಬಸವಣ್ಣನವರ ಹುಟ್ಟು, ಬಾಲ್ಯ, ಬಾಲಲೀಲೆ, ಗುರುಗಳೊಂದಿಗೆ ಸಂವಾದ, ಜನಿವಾರವನ್ನು ನಿರಾಕರಣೆ ಮಾಡಿದ್ದು, ಕೂಡಲ ಸಂಗಮಕ್ಕೆ ತೆರಳಿದ್ದು, ಅಧ್ಯಯನ ನಿರತರಾದದ್ದು, ಗಂಗಾAಬಿಕೆಯೊAದಿಗೆ ವಿವಾಹ, ಗುಪ್ತಲಿಪಿ ಓದುವುದು, ನಿಧಿಯ ಬಗ್ಗೆ ಮಾಹಿತಿ ನೀಡುವುದು.
ವ್ಯರ್ಥ ಆಚರಣೆಗಳನ್ನು ನಿರಕರಿಸುವುದು, ಸಮಾನತೆಯ ಹರಿಕಾರ, ಅನುಭವ ಮಂಟಪ, ಹರಳಯ್ಯ-ಮಧುವರಸರ ಮಕ್ಕಳ ವಿವಾಹ, ಮಂತ್ರಿಪದವಿ ನಿರಾಕರಣೆ, ಏಳೆಹೂಟೆ ಪ್ರಸಂಗ, ಬಿಜ್ಜಳನ ಹತ್ಯೆ, ಶರಣರ ಮೇಲೆ ಬಿಜ್ಜಳನ ಸೈನಿಕರ ಆಕ್ರಮಣ, ಹಸ್ತಪ್ರತಿಗಳ ಸಂರಕ್ಷಣೆ, ಬಸವಣ್ಣನವರ ಐಕ್ಯದ ಜೀವನ ಸಂಗತಿಗಳನ್ನು ಅಲ್ಲದೆ ಕಾಯಕ ನಿರತ ಶಿವಶರಣರಾದ ಶರಣ ಅಂಬಿಗರ ಚೌಡಯ್ಯ, ಶರಣ ಮಡಿವಾಳ ಮಾಚಿದೇವ, ಶರಣ ಅರಿವಿನ ಮಾರಿತಂದೆ, ಶರಣ ಮೇದಾರ ಕೇತಯ್ಯ, ಶರಣ ಮಾದಾರ ಚೆನ್ನಯ್ಯ, ಶರಣೆ ಮಾಯಿದೇವಿ ಇತ್ಯಾದಿ ಶಿವಶರಣರ ಉಬ್ಬುಶಿಲ್ಪಗನ್ನು ಇಲ್ಲಿ ಅಳವಡಿಸಲಾಗಿದೆ.