ಬಸವಪೂರ್ವ ಸಮಾಜದಲ್ಲಿನ ಭೀಕರ ಸಾಮಾಜಿಕ ವ್ಯವಸ್ಥೆಯನ್ನು ಕುರಿತು ಸಿಮೆಂಟ್ ಮಾಧ್ಯಮದ ಶಿಲ್ಪಗಳನ್ನು ಇಲ್ಲಿ
ಅಳವಡಿಸಲಾಗಿದೆ. ೧೨ನೇಯ ಶತಮಾನದ ಪೂರ್ವದಲ್ಲಿಯ ಸಾಮಾಜಿಕ ಜೀವನದ ಚಿತ್ರಣವನ್ನು ಇದು ಪ್ರತಿನಿಧಿಸುತ್ತದೆ. ಅಂದು ಹಿಂದೂ
ಧರ್ಮದಲ್ಲಿ ರೂಢಿಯಲ್ಲಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ –ಎಂಬ ನಾಲ್ಕು ಜಾತಿಗಳಲ್ಲಿದ್ದ ಅಸಮಾನತೆಯ ಭಾವನೆಗಳನ್ನು ಇಲ್ಲಿಯ
ಶಿಲ್ಪಗಳು ತೋರಿಸಿಕೊಡುತ್ತವೆ. ಉದಾ: ಅಸ್ಪೃಶ್ಯರಿಗೆ ಶಿಕ್ಷಣ ನಿರಾಕರಣೆ, ದೇವಾಲಯ ಪ್ರವೇಶ ನಿಷೇಧ, ವ್ಯಾಪಾರದ ದೃಶ್ಯಗಳು, ವ್ಯವಸಾಯದ
ಚಿತ್ರಣ, ಹೋಮ, ಹವನದ ದೃಶ್ಯ, ಕ್ಷತ್ರಿಯನೊಬ್ಬ ಕುದುರೆಯೇರಿ ಬರುತ್ತಿರುವ ದೃಶ್ಯ, ಶೂದ್ರರ ದಿನನಿತ್ಯದ ಜೀವನ ಶೈಲಿ ಇತ್ಯಾದಿ ಶಿಲ್ಪಗಳನ್ನು
ಇಲ್ಲಿ ಅನಾವರಣಗೊಳಿಸಲಾಗಿದೆ.
