ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಬಸವಾದಿ ಶಿವಶರಣರು
ಯಾವುದೇ ಜಾತಿ, ಮತ, ಪಂಥವೆನ್ನದೇ ಸರ್ವರಿಗೂ ಸಮಾನ ಅವಕಾಶವನ್ನು ನೀಡಿದರು. 

ದಿನನಿತ್ಯ ಶರಣರು ತಮ್ಮ ಕಾಯಕವನ್ನು ಮುಗಿಸಿ
ಅಂದು ಬಂದ ಆದಾಯದಿಂದ ಜಂಗಮದಾಸೋಹವನ್ನು ಮಾಡಿಸುತ್ತಿದ್ದರು. ಸಂಜೆಯ ಹೊತ್ತು ಎಲ್ಲ ಶರಣ-ಶರಣೆಯರು ಸೇರಿ ತಮ್ಮ
ಧಾರ್ಮಿಕ ಮತ್ತು ವೈಚಾರಿಕ ಚಿಂತನೆಗಳನ್ನು ವಚನಗಳೆಂಬ ಸಾಹಿತ್ಯಕ ರೂಪದಲ್ಲಿ ರಚಿಸುತ್ತಿದ್ದರು. ನಂತರ ಅವುಗಳ ಚಿಂತನ-ಮAಥನ
ಮಾಡುತ್ತಿದ್ದರು. 

ಇಂತಹ ಕಾರ್ಯಗಳನ್ನು ನಡೆಸುತ್ತಿದ್ದ ಪವಿತ್ರ ಸ್ಥಳವೇ ಅನುಭವಮಂಟಪ’. ಜಾತಿ, ಮತ, ವರ್ಗ, ಮಹಿಳೆ, ಪುರುಷ –ಇವೇ
ಮುಂತಾದ ಭೇದಗಳನ್ನು ತೊರೆದು ತಮ್ಮ ವಿಚಾರಗಳನ್ನು, ಚಿಂತನೆಗಳನ್ನು ನಿರ್ಭಿಡೆಯಿಂದ ಅಭಿವ್ಯಕ್ತಿಸುತ್ತಿದ್ದರು. 

ಈ ಅನುಭವಮಂಟಪದ
ಮೂಲ ರೂವಾರಿ ಬಸವಣ್ಣನವರದ್ದಾಗಿದ್ದು ಇದರ ಅಧ್ಯಕ್ಷತೆಯನ್ನು ಹಿರಿಯ ಶರಣರಾದ ಅಲ್ಲಮಪ್ರಭುದೇವರು ವಹಿಸಿಕೊಂಡಿದ್ದರು.

Basava Sharana Art Gallery

KUDALA SANGAMA · KARNATAKA

A premium cultural and heritage tourism destination dedicated to preserving and celebrating the timeless philosophy of Basavanna and the Sharana movement of Karnataka.

Quick Links
Visitor Info
Contact & Location

© 2026 Basava Sharana Art Gallery , Website Designed and Developed by Programic IT Solutions, Raichur

4.6 on Google